ಕುಖ್ಯಾತ ರೌಡಿ ಸ್ಲಂ ಭರತನನ್ನು ಬೆಂಗಳೂರು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಆತನನ್ನು ಸೋಮವಾರವವಷ್ಟೇ ಉತ್ತರಪ್ರದೇಶದ ಮುರದಾಬಾದ್‌ನಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ವಿಚಾರಣೆಗೆ ಕರೆದೊಯ್ಯುವ ವೇಳೆ ಸಿನಿಮೀಯ ರೀತಿಯಲ್ಲಿ ನಡೆದ ಘಟನೆಯಲ್ಲಿ ರೌಡಿ ಭರತ್ ಹತನಾಗಿದ್ದಾನೆ. ಗುರುವಾರ ನಸುಕಿನ ಜಾವ 5 ಗಂಟೆ ಸುಮಾರು ಪೀಣ್ಯ ಬಳಿ ಸ್ಲಂ ಭರತನನ್ನು ಕರೆದೊಯ್ಯುತ್ತಿದ್ದಾಗ ಆತನ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ಮಾಡಿ ಭರತನನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಬೆನ್ನತ್ತಿದ್ದ ಪೊಲೀಸರು ಪೀಣ್ಯದ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಎನ್‌ಕೌಂಟರ್ ಮಾಡಿ ಆತನ ಕಥೆ ಮುಗಿಸಿದ್ದಾರೆ.
Encounter On Rowdy Slum Bharath By Bengaluru Police. Rowdy Slum Bharath Involving In Actor Yash sketch Conspiracy.